ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಮುಗಿಸಲು ರೈತ ಮುಖಂಡ ಕಸವನಹಳ್ಳಿ ರಮೇಶ್ ಆಗ್ರಹ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ರಿವತಗತಿಯಲ್ಲಿ ಮುಂದೆ ಸಾಗಿಸಿ ಬರದ ನಾಡಿನ ಜನತೆಗೆ ನೀರಿನ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಹಿರಿಯೂರು ರೈತ ಮುಖಂಡರಾದ ಕಸವನಹಳ್ಳಿ ರಮೇಶ್ ಆಗ್ರಹಿಸಿದ್ದಾರೆ. ಭದ್ರಾ ಮೇಲ್ದಂಡೆಯ ಪ್ರಾರಂಬಿಕ ಹಂತವಾದ ಚಿಕ್ಕಮಗಳೂರು ಜಿಲ್ಲೆಯ ಮುತ್ತಿನ ಕೊಪ್ಪದ ಬಳಿ ಇರುವ ಗಾಜನೂರು ಹಿಂಭಾಗದಲ್ಲಿನ ಪಂಪ ಹೌಸ್ ಬಳಿ ಚಿತ್ರದುರ್ಗದ ರೈತರು ತೆರಳಿ ವೀಕ್ಷಣೆ ಮಾಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ