ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಶಿವಮೊಗ್ಗ ನಗರದಲ್ಲಿ ಅಭಿಮಾನಿಗಳಿಂದ ಶಿವಮೊಗ್ಗ ಗ್ರಾಮಾಂತರ ದೇವತೆ ಶ್ರೀ ಕೋಟೆ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆಯನ್ನು ಶುಕ್ರವಾರ ಸಲ್ಲಿಸಲಾಯಿತು. ಬಳಿಕ ಅಗತ್ಯ ಇರುವವರಿಗೆ ಬೆಡ್ ಶಿಟ್ ವಿತರಿಸುವ ಮೂಲಕ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಹರಕೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.