ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 73ರಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ ಅನುದಾನದ ಅಡಿಯಲ್ಲಿ ಅಂದಾಜು 68 ಲಕ್ಷ ರೂಪಾಯಿಗಳಲ್ಲಿ ಶಿವಶಂಕರ ಕಾಲೋನಿಯಲ್ಲಿ ಸಮುದಾಯ ಭವನ, ಶಿವಶಂಕರ ಕಾಲೋನಿ ಸರ್ಕಾರಿ ಶಾಲೆಯಿಂದ ಕಾರವಾರ ಮುಖ್ಯ ರಸ್ತೆವರೆಗೆ ಸಿ. ಸಿ ರಸ್ತೆ ನಿರ್ಮಾಣ ಮತ್ತು ಘೋಡಕೆ ಫ್ಯಾಕ್ಟರಿಯಿಂದ ಕೃಷ್ಣಾಪುರ ವಾಲಿಯವರ ಮನೆವರೆಗೆ ಯು. ಜಿ. ಡಿ ಕಾಮಗಾರಿಗಳಿಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧರ್ಮದಾಸ ಪೂಜಾರ ಸಮಾಜದ ಮಾಜಿ ಅಧ್ಯಕ್ಷರು, ವಾರ್ಡ್ ನಂ 68ರ ಪಾಲಿಕೆ ಸದಸ್ಯರಾದ ಶ್ರೀಮತಿ ಶೀಲಾ ಮಂಜುನಾಥ ಕಾಟಕರ ಸೇರಿದಂತೆ ಉಪಸ್ಥಿತಿ ಇದ್ದರು.