ಹಾವೇರಿ: ಗುರುವಾರ ನಡೆಯಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಜಯಂತಿಗೆ ಸಕಲ ಸಿದ್ದತೆ
Haveri, Haveri | Oct 1, 2025 ಹಾವೇರಿ ಜಿಲ್ಲೆಯಾದ್ಯಂತ ಗುರುವಾರ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಜಯಂತಿ ಆಚರಿಸಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ. ಹಾವೇರಿ ನಗರದ ಮಧ್ಯದಲ್ಲಿರುವ ಮಹಾತ್ಮಾ ಗಾಂಧಿಜಿ ವೃತ್ತದಲ್ಲಿ ಗಾಂಧಿಜಿ ಪ್ರತಿಮೆಗೆ ಬಣ್ಣಗಳನ್ನ ಹಚ್ಚಲಾಗಿದೆ. ವಿಶೇಷ ಮಂಟಪ ನಿರ್ಮಿಸಿದ್ದು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ ಸೇರಿದಂತೆ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಆಯೋಜಿಸಿದೆ