ಗೌರಿಬಿದನೂರು: ಬಿ.ಬೊಮ್ಮಸಂದ್ರ ಸೇರಿದಂತೆ 8 ಗ್ರಾಮಗಳಲ್ಲಿ 4.50 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ
ಗೌರಿಬಿದನೂರು ತಾಲ್ಲೂಕಿನ ಕಸಬಾ,ಡಿ.ಪಾಳ್ಯ,ಹೋಬಳಿಯ ಬಿ.ಬೊಮ್ಮಸಂದ್ರ,ನಾಮಗೊಂಡ್ಲು,ಹುದುಗೂರು,ದೊಡ್ಡಕುರುಗೋಡು,ಇಡಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 8 ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಇಲಾಖೆಯ ಅನುದಾನಗಳಲ್ಲಿ ಸುಮಾರು 4.50.ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ಚಾಲನೆ ನೀಡಿದರುಮ ಸುಸಜ್ಜಿತವಾದ ಸಿ.ಸಿ.ರಸ್ತೆಗಳು, ಚರಂಡಿ ನಿರ್ಮಾಣ ಹಾಗೂ ನೀರಾವರಿ ಇಲಾಖೆಯಿಂದ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.