ತಿಪಟೂರು: ತಿಪಟೂರಿನಲ್ಲಿ ಕ್ರಷರ್ ಪ್ರಪಾತಕ್ಕೆ ಬಿದ್ದ ಲಾರಿ ಸ್ಥಳದಲ್ಲಿಯೇ ಚಾಲಕ ಸಾವು
ತಾಲ್ಲೂಕಿನ ಈರಲಗೆರೆ ಗ್ರಾಮದ ಶ್ರೀ ಕೃಷ್ಣ ಕ್ರಷರ್ನಲ್ಲಿ ಜಲ್ಲಿ ತುಂಬಿದ ಲಾರಿ 80 ಅಡಿ ಆಳದ ಪ್ರಪಾತಕ್ಕೆ ಬಿದ್ದು 40ವರ್ಷದ ಭದ್ರಾವತಿ ಮೂಲದ ಚಾಲಕ ಚನ್ನಕೇಶವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ 5 ಗಂಟೆಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಕರು ಸುರಕ್ಷತಾ ನಿಯಮ ಪಾಲನೆ ಮಾಡದ ಗಣಿ ನಿರ್ವಹಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಡೆಗೋಡೆ ಇಲ್ಲದಿರುವ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದರು. ಸ್ಥಳೀಯರು ಕ್ರಷರ್ ನಿರಂತರ ಸ್ಫೋಟಗಳಿಂದ ಬೆಳೆ ನಾಶ, ಬೋರ್ವೆಲ್ ಬತ್ತುವಿಕೆ, ನೀರು ಮಾಲಿನ್ಯ ಸಮಸ್ಯೆ ಉಂಟಾಗಿದೆ ಎಂದು ತಹಸೀಲ್ದಾರ್ಗೆ ದೂರು ಸಲ್ಲಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಆದರೂ ಕ್ರಮ ಕೈಗೊಳ್ಳದ ಪರಿಣಾಮ ಕಾರ್ಮಿಕರ ಜ