ಹುನಗುಂದ: ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿಯೇ ಬಸ್ ಚಲಾವಣೆ : ಜಾಲಕಮಲದಿನ್ನಿ - ಕರಡಿ ಸೇತುವೆ ಮೇಲೆಯೇ ಕೆಟ್ಟು ನಿಂತ್ ಬಸ್
ಜೂನ್ ೧೪ ಮುಂಜಾನೆ ೧೦ ಗಂಟೆಯ ಸಂಧರ್ಭ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಹುನಗುಂದ - ಜಾಲಕಮಲದಿನ್ನಿ - ಕರಡಿ ಗ್ರಾಮಕ್ಕೆ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದರು. ಹುನಗುಂದ ಬಸ್ ಡಿಪೋದ ಬಸ್ ಚಾಲಕ ಮುಳುಗಡೆಯಾದ ಸೇತುವೆಯ ಮೇಲೆ ಸಂಚಾರ ಮಾಡಲು ಹೋದಾಗ ಬಸ್ ಮುಳಗುಡೆಯ ಸೇತುವೆ ಮೇಲೆ ಕೆಟ್ಟು ನಿಂತ ಘಟನೆ ನಡೆದಿದೆ. ಕೆಟ್ಟ ಬಸ್‌ನ್ನು ಟ್ರಾö??ಕ್ಟರ್ ಸಹಾಯದಿಂದ ಬಸ್‌ನ್ನು ಎಳೆದು ದಡವನ್ನು ಸೇರಿಸಿ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.