ಯೆಲಹಂಕ: ಆನ್ಲೈನ್ ಗೇಮ್ ಗೀಳಿಗೆ ಬಿದ್ದಿದ್ದ ಸೋದರಳಿಯನ ಹತ್ಯೆ, ಆರೋಪಿಯನ್ನ ಬಂಧಿಸಿದ ಸೋಲದೇವನಹಳ್ಳಿ ಪೊಲೀಸರು
ಆನ್ಲೈನ್ ಗೇಮ್ ಆಡಲು ಹಣಕ್ಕೆ ಪೀಡಿಸುತ್ತಿದ್ದ ಎಂದು ವ್ಯಕ್ತಿಯೋರ್ವ ತನ್ನ ಸಹೋದರಿಯ ಮಗನನ್ನ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಅಮೋಘಕೀರ್ತಿ (14) ಹತ್ಯೆಯಾದ ಬಾಲಕ.ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿನಾಯಕ ಲೇಔಟ್ನಲ್ಲಿ ಘಟನೆ ನಡೆದಿದ್ದು ಬಾಲಕನ ಸೋದರ ಮಾವ ನಾಗಪ್ರಸಾದ್ (50) ಎಂಬಾತನನ್ನ ಬಂಧಿಸಲಾಗಿದೆ. ಪ್ರಕರಣದ ಕುರಿತು ಆಗಸ್ಟ್ 8ರಂದು ಸಂಜೆ 4 ಗಂಟೆಗೆ ಮಾಹಿತಿ ನೀಡಿದ ಪೊಲೀಸರು, '8 ತಿಂಗಳಿನಿಂದ ವಿನಾಯಕ ಲೇಔಟ್ನಲ್ಲಿರುವ ಮಾವ ನಾಗಪ್ರಸಾದ್ ಮನೆಯಲ್ಲಿ ಅಮೋಘಕೀರ್ತಿ ವಾಸವಿದ್ದ. ಆನ್ಲೈನ್ ಗೇಮ್ ಗೀಳಿಗೆ ಬಿದ್ದಿದ್ದ ಅಮೋಘಕೀರ್ತಿ, ಹಣಕ್ಕಾಗಿ ಪೀಡಿಸುತ್ತಿದ್ದುದರಿಂದ ಹತ್ಯೆಗೈದಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದರು.