ಕುಂದಗೋಳ: ಕನ್ನೇರಿಮಠದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲೆಗೆ ಹೇರಿರುವ ಸರ್ಕಾರದ ನಿರ್ಬಂಧ ಖಂಡಿಸಿ ಕುಂದಗೋಳದಲ್ಲಿ ಪ್ರತಿಭಟನೆ
ಕನ್ನೇರಿ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಯವರಿಗೆ ವಿಜಯಪುರ ಜಿಲ್ಲೆಗೆ ಹೇರಿರುವ ಸರ್ಕಾರದ ನಿರ್ಬಂದ ಖಂಡಿಸಿ ಹಾಗೂ ಅವರಿಗೆ ಬೆಂಬಲವಾಗಿ ಇಂದು ಕುಂದಗೋಳದ ಗಾಳಿ ಮರಿಯಮ್ಮ ದೇವಿ ವೃತದಿಂದ ತಹಶೀಲ್ದಾರ್ ಕಚೇರಿವರೆಗೆ - ಕುಂದಗೋಳ ತಾಲೂಕು ಕಾಡಸಿದ್ದೇಶ್ವರ ಭಕ್ತ ಮಂಡಳಿ ಹಾಗೂ ಬಸವಾದಿ ಶರಣರ ಹಿಂದೂ ವೇದಿಕೆಯಿಂದ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕರಾದ ಎಂ.ಆರ್.ಪಾಟೀಲ್ ಅವರು ಭಾಗವಹಿಸಿ, ಕನ್ನೇರಿ ಶ್ರೀಗಳ ಮೇಲೆ ನಿಷೇಧವನ್ನು ಸರ್ಕಾರ ತಕ್ಷಣ ರದ್ದುಪಡಿಸಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ವಿವಿಧ ಮಠದ ಸ್ವಾಮೀಜಿಗಳು, ಸಮಾಜದ ಮುಖಂಡರು, ಶ್ರೀಗಳ ಭಕ್ತವೃಂದ ಹಾಗೂ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.