ಕಲಬುರಗಿ : ನನ್ನ ಗಂಡ ನನ್ನ ಶೀಲ ಶಂಕಿಸಿ ಮನೆಯಲ್ಲಿ ಸೈಕೋ ಥರ ವರ್ತಿಸುತ್ತಿದ್ದ.. ಮನೆಯಲ್ಲಿ ನಾವ್ಯಾರು ಇಲ್ಲದ ವೇಳೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕಲಬುರಗಿ ನಗರದ ಶಿವಶಕ್ತಿ ಬಡಾವಣೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಖಂಡುರಾಜ್ ಪತ್ನಿ ಪ್ರಿಯಾ ಹೇಳಿದ್ದಾರೆ.. ಡಿಸೆಂಬರ್ 29 ರಂದು ಮಧ್ಯಾನ 3 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ನಿನ್ನೆಯೇ ನಮಗೆ ನಿದ್ದೆ ಗೋಲಿ ಕೊಟ್ಟು ಸಾಯಿಸಬೇಕೆಂದು ಗಲಾಟೆ ಮಾಡಿದ್ದನು.. ನಾವು ಭಯದಿಂದ ಮನೆ ಬಿಟ್ಟು ಹೊರಗೆ ಹೋದವೇಳೆ ನನ್ನ ಗಂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಿಯಾ ಹೇಳಿದ್ದಾರೆ