ಜ್ಯೂಸ್ ಖರೀದಿಸಿದ ಹಣ ನೀಡುವಂತೆ ಕೇಳಿದಾತನ ಮೇಲೆ ಹಲ್ಲೆ ನಡೆಸಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜುವಳ್ಳಿಯ ಬೇಕರಿ ಒಂದರಲ್ಲಿ ನಡೆದಿದೆ ಮೂಲದ ವ್ಯಕ್ತಿಯೊಬ್ಬ ಬೆಜ್ಜುವಳ್ಳಿಯಲ್ಲಿರುವ ಬೇಕರಿಯೊಂದಕ್ಕೆ ಬಂದು ಜ್ಯೂಸ್ ಖರೀದಿಸಿದ್ದಾನೆ ಬಳಿಕ ಬೇಕರಿ ಮಾಲೀಕ ಜ್ಯೂಸ್ ನ ಹಣವನ್ನು ಕೇಳಿದಾಗ ಆ ವ್ಯಕ್ತಿ ತಗಾದೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಆರಂಭಿಸಿದ್ದಾನೆ. ಜಗಳ ಬಿಡಿಸಲು ಮುಂದಾದ ವ್ಯಕ್ತಿಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತಾದ ಮಾಹಿತಿ ಸೋಮವಾರ ಲಭ್ಯವಾಗಿದೆ.