ಅಫಜಲ್ಪುರ: ಚಿಣಮಗೇರಾ ಕೆಪಿಆರ್ ಸಕ್ಕರೆ ಕಾರ್ಖಾನೆ ಎದುರು ಟ್ರಾಕ್ಟರ್ ಮಾಲೀಕರ ಪ್ರತಿಭಟನೆ
ಅಫಜಲಪುರ ತಾಲೂಕಿನ ಚಿಣಮಗೇರಾ ಕೆಪಿಆರ್ ಸಕ್ಕರೆ ಕಾರ್ಖಾನೆ ಎದುರು ಕಬ್ಬು ಸಾಗಾಣಿಕೆ ಟ್ರಾಕ್ಟರ್ ಮಾಲೀಕರು ಬಾಕಿ ಹಣ ಪಾವತಿ ಮಾಡುವಂತೆ ಪ್ರತಿಭಟನೆ ನಡೆಸಲಾಯಿತು. ಕಾರ್ಖಾನೆಯವರು ಕಳೆದ ವರ್ಷ ಟನ್ಗೆ ₹57 ರೂ. ದರದಂತೆ ಸುಮಾರು ₹5 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಕೂಡಲೇ ಹಣ ಪಾವತಿ ಮಾಡುವಂತೆ ಶೆನಿವಾರ 4 ಗಂಟೆಗೆ ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಬೆಂಬಲ ಸೂಚಿಸಿ, ಟ್ರಾಕ್ಟರ್ ಮಾಲೀಕರೊಂದಿಗೆ ಅನ್ಯಾಯ ಸರಿಯಲ್ಲ, ಅವರ ಪರಿಶ್ರಮಕ್ಕೆ ತಕ್ಕಂತೆ ಹಣವನ್ನು ತಕ್ಷಣ ಪಾವತಿಸುವಂತೆ ಒತ್ತಾಯಿಸಿದರು..