ಚನ್ನಗಿರಿ: ಕುಡಿಯಲು ನೀರು ನೀಡದ ಹಿನ್ನೆಲೆ ಮಾಡಾಳ್ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟನೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾಡಾಳ್ ಗ್ರಾಮದಲ್ಲಿ ಒಂದು ತಿಂಗಳು ಆದರು ಸಹ ಕುಡಿಯುವ ನೀರು ಒದಗಿಸಿದ ಹಿನ್ನೆಲೆ ಇಂದು ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಭೀಗ ಹಾಕಿ ಪ್ರತಿಭಟನೆ ಮಾಡಿದರು. ಗ್ರಾಮ ಪಂಚಾಯಿತಿಗೆ ಆಗಮಿಸುತ್ತಿದ್ದ ಪಿಡಿಓ ಗೆ ಗೆರಾವ್ ಹಾಕಿದರು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು, ಮುಖಂಡರು ಹಾಜರಿದ್ದರು