ಹುಬ್ಬಳ್ಳಿ: ನಗರ ಹೊರವಲಯದ ಹುಬ್ಬಳ್ಳಿ–ಗದಗ ರಿಂಗ್ರೋಡ್ ಬಳಿ ಮೂವರು ದುಷ್ಕರ್ಮಿಗಳು ಲಾರಿ ಚಾಲಕನಿಂದ ₹30,500 ಹಣ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.‘ಆಂಧ್ರಪ್ರದೇಶದ ಕರಿ ಉಮಾಮಹೇಶ್ ಎಂಬುವರು ಹುಬ್ಬಳ್ಳಿಯಿಂದ ಗದಗ ಕಡೆಗೆ ಲಾರಿ ತೆಗೆದುಕೊಂಡು ಹೋಗುವಾಗ ಹೆದ್ದಾರಿಯ ಕುಂದಗೋಳ ಬಸ್ ನಿಲ್ದಾಣದ ಬಳಿ ಸ್ಕೂಟರ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಲಾರಿ ಟೈಯರ್ ಪಂಕ್ಚರ್ ಆಗಿದೆ ಎಂದು ಸುಳ್ಳು ಹೇಳಿ ಲಾರಿ ನಿಲ್ಲಿಸಿದ್ದಾರೆ. ಈ ವೇಳೆ ಕೆಳಗಿಳಿದ ಕರಿ ಉಮಾಮಹೇಶ್ ಅವರಿಂದ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.