ಡಿ.೨೦ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಸಮಾವೇಶ ; ಗಿರೀಶ್ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದಿಂದ ಡಿಸೆಂಬರ್ ೨೦ರಂದು ನಡೆಯಲಿರುವ ಕೋಲಾರ ಜಿಲ್ಲಾ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಅಂತಿಮ ಹಂತದ ಚಟುವಟಿಕೆಗಳು ಚುರುಕಿನಿಂದ ನಡೆಯುತ್ತಿದ್ದು, ಎಲ್ಲರ ಪ್ರಯತ್ನದಿಂದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಶಿಕ್ಷಣ ಪ್ರೇಮಿ ವ್ಯಕ್ತಿತ್ವಗಳಿಗೆ ಗೌರವ ನೀಡುವ ಅವಕಾಶ ಕೂಡಿ ಬಂದಿದೆ ಎಂದು ಸಮಾರಂಭದ ಜವಾಬ್ದಾರಿ ವಹಿಸಿಕೊಂಡಿರುವ ಸಂಘದ ಕಾರ್ಯಾಧ್ಯಕ್ಷ ಗಿರೀಶ್ ಕುಮಾರ್ ತಿಳಿಸಿದರು. ಕೋಲಾರ ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾವೇಶದ ಅಂತಿಮ ಭೌತಿಕ ಸಭೆಯಲ