ಸಿಂದಗಿ: ಮಲಘಾಣ ಗ್ರಾಮದ ಸೌಂದರ್ಯ ಹಚಡದ ದ್ವಿತೀಯ ಪಿಯುಸಿಯ ಕಲಾ ವಿಭಾಗದ ಫಲಿತಾಂಶದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾಳೆ.
ಆಲಮೇಲ ತಾಲೂಕಿನ ಮಲಘಾಣ ಗ್ರಾಮದ ಶರಣಬಸವೇಶ್ವರ ಪಿ.ಯು.ಕಾಲೇಜಿನಲ್ಲಿ ವ್ಯಾಸಂಗಮಾಡಿದ ಸೌಂದರ್ಯ ಹಚಡದ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ಫಲಿತಾಂಶದಲ್ಲಿ 593 ಅಂಕಗಳನ್ನು ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾಳೆ. ಮಲಘಾಣದಲ್ಲಿ ಬುಧವಾರ ಮಧ್ಯಾಹ್ನ12 ಗಂಟೆಗೆ ಸೌಂದರ್ಯ ಹಚಡದ ಪಾಲಕರು ಸಿಹಿ ಹಂಚಿ ಸಂಬ್ರಮಿಸಿದರು.