ಇನ್ನೋವಾ ಕ್ರೀಸ್ಟಾ ಕಾರ್ ನಲ್ಲಿ ಬಂದು ಕುರಿ ಕಳವು ಮಾಡಿದ್ದ ಖತರ್ನಾಕ್ ಕಳ್ಳರನ್ನ ಸಿನಿಮಿಯ ರೀತಿಯಲ್ಲಿ ಐಮಂಗಲ ಪೊಲೀಸರು ಭೇಧಿಸಿದ್ದಾರೆ. ಮೂರು ಮಂದಿ ಕಳ್ಳರನ್ನ ಬಂಧಿಸಲಾಗಿದೆ. ಗುಲ್ಬರ್ಗ ಮೂಲದ ವಾಸೀಂ, ಹುಬ್ಬಳ್ಳಿ ಮೂಲದ ವಿಕಾಸ್, ಬಳ್ಳಾರಿ ಮೂಲದ ಉಮೇಶ್ ಬಂಧಿತ ಆರೋಪಿಗಳು. ಮದ್ದನಕುಂಟೆ, ಮಾರೇನಹಳ್ಳಿ, ರಂಗೇನಹಳ್ಳಿ, ಉಪ್ಪಾರಹಳ್ಳಿ, ವದ್ದಿಕೆರೆ ಸೇರಿ ಹಲವು ಕಡೆ ಕುರಿ ಕಳವು ಮಾಡಲಾಗಿತ್ತು. ಪ್ರತಿ ಬಾರಿಯೂ ಇನ್ನೋವಾ ಕ್ರೀಸ್ಟಾ ಕಾರ್ ನಲ್ಲೇ ಬಂದು ಕುರಿ ಕಳ್ಳತನ ಮಾಡ್ತಿದ್ದರು. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ, ಕಳರನ್ನ ಬಂಧಿಸಿದ್ದಾರೆ. ಇನ್ನೋವಾ ಕ್ರೀಸ್ಟಾ ಕಾರ್ ಸೇರಿ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.