ಕಲಬುರಗಿ: ನಗರದ ಅಪ್ಪಾ ದೇವಸ್ಥಾನಕ್ಕೆ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಭೇಟಿ, ಡಾ. ಶರಣಬಸವಪ್ಪ ಗದ್ದುಗೆಯ ದರ್ಶನ
ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಯಕ, ಅನ್ನ ಹಾಗೂ ಜ್ಞಾನ ದಾಸೋಹದ ಮೂಲಕ ಅಪ್ರತಿಮ ಸೇವೆ ಸಲ್ಲಿಸಿದ ಮಹದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ದಾಸೋಹ ಮಹಾಮನೆಗೆ ಭೇಟಿ ನೀಡಿ ಪೂಜ್ಯ ಚಿರಂಜಿವಿ ದೊಡ್ಡಪ್ಪ ಅಪ್ಪಾ ಹಾಗೂ ದ್ರಾಕ್ಷಾಯಿಣಿ ಅವ್ವಾಜಿ ಅವರ ಆಶೀರ್ವಾದ ಪಡೆದು, ಇತ್ತೀಚೆಗೆ ಲಿಂಗೈಕ್ಯರಾದ ಡಾ. ಶರಣಬಸವಪ್ಪಅಪ್ಪ ಅವರ ಗದ್ದುಗೆಯ ದರ್ಶನ ಮಾಡಿದರು. ಮಂಗಳವಾರ 11 ಗಂಟೆ ಸುಮಾರಿಗೆ ಭೇಟಿ ನೀಡಿದ್ದರು.