ಕಲಬುರಗಿ: ನಿಂಬರ್ಗಾದಲ್ಲಿ ಉತ್ತಮ ಶಿಕ್ಷಕಿಯರ ಗೌರವ ಸಮಾರಂಭ
ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕಲಬುರಗಿ ಪ್ರಭ ಪತ್ರಿಕೆಯ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೀತಾ ಮತ್ತು ಅಂಬಿಕಾ ಅವರಿಗೆ ಅಭಿನಂದನಾಸಮಾಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಗೌರವ ಪತ್ರಿಕೆಯ ಸಂಪಾದಕ ಸುರೇಶ ಗೌರೆ, ಶಿಕ್ಷಕರು ವಿದ್ಯಾರ್ಥಿಗಳ ಜೀವನದ ನಿಜವಾದ ಶಿಲ್ಪಿಗಳು ಎಂದು ಶ್ಲಾಘಿಸಿದರು. ಪ್ರಶಸ್ತಿ ಪಡೆದ ಶಿಕ್ಷಕಿಯರು ರಾಜ್ಯಮಟ್ಟದ ಗೌರವಗಳವರೆಗೆ ತಲುಪಲಿ ಎಂದು ಸಗರ ಸಂಭ್ರಮ ಪತ್ರಿಕೆಯ ಸಂಪಾದಕ ವಿಠಲ ಚಿಕಣಿ ಹಾರೈಸಿದರು. ಶಿಕ್ಷಕರಾದ ಶಿವಪುತ್ರ ಮದಗುಣಕಿ, ಆಶಾ ಶರಣ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಮಂಗಳವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಜರುಗಿತು....