ಚಿತ್ರದುರ್ಗ: ನಗರದ ನೆಹರು ನಗರದ ಸಿ.ಅಂಗನವಾಡಿ ಕೇಂದ್ರಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ
ಕೌಟುಂಬಿಕ ಹಿನ್ನೆಲೆ ಮೆದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಯಿಂದ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಮಾನಸಿಕ ರೋಗ ಯಾರಿಗಾದರೂ ಬರಬಹುದು. ಮೂಡನಂಬಿಕೆ ಬಿಟ್ಟು ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆಯಿರಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ಇಲ್ಲಿನ ನೆಹರು ನಗರ ಅಂಗನವಾಡಿ ಸಿ ಕೇಂದ್ರದಲ್ಲಿ ಬುಧವಾರ ಸ್ವಸ್ತನಾರಿ ಸಶಕ್ತ ಪರಿವಾರ ಅಭಿಯಾನದಡಿ ಆಯೋಜಿಸಿದ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಲೆಗೆ ಪೆಟ್ಟು ಆದಾಗ ಆಲೋಚನೆಯಗಳಲ್ಲಿ ಬದಲಾವಣೆ ತೀವ್ರತರ ಸಂಕಷ್ಟಕ್ಕೆ ಒಳಗಾದಾಗ ಮನೋವೈದ್ಯದಲ್ಲಿ ಪರೀಕ್ಷಿಸಿಕೊಂಡು, ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.