ಮೈಸೂರು: ಕಂದಾಯ ದಿನಾಚರಣೆ ಹಿನ್ನೆಲೆ ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ: ಹರಗನಪುರದಲ್ಲಿ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ
Mysuru, Mysuru | Jun 10, 2025 ಜುಲೈ 1 ರಂದು ರಾಜ್ಯಾದ್ಯಂತ ಕಂದಾಯ ದಿನಾಚರಣೆ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಂದಾಯ ದಿನಾಚರಣೆಯನ್ನು ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲು ದೊಡ್ಡಕವಲಂದೆ ಕಂದಾಯ ಇಲಾಖೆ ಸಜ್ಜಾಗಿದೆ. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂದಾಯ ದಿನಾಚರಣೆ ಮಾಡಲು ದೊಡ್ಡಕವಲಂದೆ ನಾಡ ಕಛೇರಿಯ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಮತ್ತು ಉಪ ತಹಶೀಲ್ದಾರ್ ಕಿರಣ್ ಕುಮಾರ್ ಈ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿರುವುದು ಸಾರ್ವಜನಿಕರ ವಲಯದಲ್ಲಿ ಪ್ರಸಂಶೆಗೆ ಪಾತ್ರವಾಗಿದೆ.