ದಾವಣಗೆರೆ: ನಗರದ ಎಸ್‍ಓಜಿ ಕಾಲೋನಿಯಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಮಾಡುವ ವೇಳೆ ಕಾಂಗ್ರೆಸ್ನವರು ಗೂಂಡಾ ವರ್ತನೆ ತೋರಿದ್ದಾರೆ;ನಗರದಲ್ಲಿ ಜಯಮ್ಮ
ಚುನಾವಣೆ ಪ್ರಚಾರಕ್ಕಾಗಿ ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿಸಿದ್ದೇಶ್ವರ್ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕೆಲವರು ಮಹಿಳೆಯರೆನ್ನದೆ ಗೂಂಡಾ ವರ್ತನೆ ತೋರಿದ್ದಾರೆ. ಎಂದು ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಸಂಚಾಲಕಿ ಹೆಚ್.ಸಿ.ಜಯಮ್ಮ, ಕಳೆದ ರಾತ್ರಿ ನಗರದ ಎಸ್‍ಓಜಿ ಕಾಲೋನಿಯಲ್ಲಿ ಬಿಜೆಪಿ ಅಭ್ಯರ್ಥಿ ಚುನಾವಣಾ ಪ್ರಚಾರ ಮಾಡುವ ವೇಳೆ ಕಾಂಗ್ರೆಸ್ ನವರು ಅನಾಗರಿಕ ಪ್ರವೃತ್ತಿಯ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿದ್ದಾರೆ. ಕಾಂಗ್ರೆಸ್ ಕಿಡಿಗೇಡಿಗಳ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.