ಹುಬ್ಬಳ್ಳಿ ನಗರ: ನಗರದಲ್ಲಿ ಗುರಾಯಿಸಿ ನೋಡಿದಕ್ಕೆ ಚಾಕು ಇರಿತ
ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.  ಅನ್ವರ್ ಅರಳಿಕಟ್ಟಿ ಎಂಬಾತನೇ ಮೇಲೆಯೇ ಚಾಕು ಇರತವಾಗಿದ್ದು, ವಾಸೀಂ ಕುಂದಗೋಳ ಚಾಕು ಇರಿದವನಾಗಿದ್ದಾನೆ. ಗುರಾಯಿಸಿದಾ ಎಂಬ ಕಾರಣಕ್ಕೆ ವಾಸೀಂ ಕುಂದಗೋಳ ಮನಬಂದಂತೆ ಚಾಕು ಇರಿದಿದ್ದಾನೆ ಎಂದು ಹೇಳಲಾಗುತ್ತಿದ್ದು, ಗಾಯಗೊಂಡಿರುವ ಅನ್ವರ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.