ಮೈಸೂರು: ನಗರದಲ್ಲಿ ಯುವ ಸಂಭ್ರಮ: ಮೊಳಗಿದ ದೇಶಪ್ರೇಮ
Mysuru, Mysuru | Sep 15, 2025 ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ‘ಯುವಸಂಭ್ರಮ’ದಲ್ಲಿ ಸೋಮವಾರದ ನೃತ್ಯರೂಪಕಗಳು ಯುವ ಸಮೂಹದಲ್ಲಿ ದೇಶಪ್ರೇಮದ ಕಿಚ್ಚನ್ನು ಮೂಡಿಸಿದವು. ದೇಶಭಕ್ತಿ, ರಾಷ್ಟ್ರೀಯತೆ, ಮಹಿಳಾ ಸಬಲೀಕರಣ, ಜೈ ಜವಾನ್– ಜೈ ಕಿಸಾನ್, ಜಾನಪದ, ಆಪರೇಷನ್ ಸಿಂಧೂರ್ , ಕನ್ನಡ ನಾಡು ನುಡಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ವಿದ್ಯಾರ್ಥಿಗಳು ಪ್ರಸ್ತುಪಡಿಸಿದ ರೂಪಕಗಳು ಪ್ರೇಕ್ಷಕ ಸಮೂಹದಲ್ಲಿ ಸಂಚನ ಮೂಡಿಸಿದವು.