ಸಿದ್ಧಾಪುರ: ತಂಡಾಗುಂಡಿ ಕ್ರಾಸ್ ಸಮೀಪ ಬಸ್-ಬೈಕ್ ಮಧ್ಯೆ ಡಿಕ್ಕಿ, ಓರ್ವ ಸಾವು
ಸಿದ್ದಾಪುರ : ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದ ತಂಡಾಗುಂಡಿ ಕ್ರಾಸ್ ಬಳಿ ನಡೆದಿದೆ. ಉಂಚಳ್ಳಿ ಜಲಪಾತ ವೀಕ್ಷಣೆಗೆ ಆರು ಜನ ಯುವಕರು 3 ಬೈಕ್ ನಲ್ಲಿ ಬಂದಿದ್ದರು. ಈ ಸಂದರ್ಭದಲ್ಲಿ ಬೈಕ್ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಶಿಗ್ಗಾಂವ್ ತಾಲೂಕಿನ ರಾಮನಕೊಪ್ಪದ ಅನಿಲ್ ಹರಿಜನ್ (25) ಮೃತಪಟ್ಟ ದುರ್ದೈವಿ . ಬಸವರಾಜ ಬಾಣದ ಗಾಯಗೊಂಡ ಯುವಕ. ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ಧಾಖಲಿಸಲಾಗಿದೆ . ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.