ಹೊಸನಗರ: ಜೇನುಕಲ್ಲಮ್ಮ ಸನ್ನಿಧಿ ಯ ವಿಕಾಸಕ್ಕೆ ಅಗತ್ಯ ಕ್ರಮ, ಕೂಡೂರಿನಲ್ಲಿ ಸಚಿವ ಮಧು ಬಂಗಾರಪ್ಪ
ಹೊಸನಗರ ತಾಲೂಕಿನ ಕೊಡೂರು ಸಮೀಪದ ಜೇನುಕಲ್ಲಮ್ಮ ದೇವಸ್ಥಾನದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ನವರಾತ್ರಿ ಅಂಗವಾಗಿ ಹೊಸನಗರ ತಾಲೂಕಿಮ ಜೇನುಕಲ್ಲಮ್ಮದೇವಿಯ ದರ್ಶನ ಪಡೆದ ನಂತರ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಸೋಮವಾರ ಸಂಜೆ 5 ಗಂಟೆಗೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದೇವಸ್ಥಾನವಾಗಿದ್ದು, ಚಂದ್ರಗುತ್ತಿ ಮಾದರಿಯಲ್ಲಿ ಕೋಡೂರು ದೇವಿಯ ಸ್ಥಳವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.