ಯಲ್ಲಾಪುರ: ವೀರಭದ್ರ ದೇವಸ್ಥಾನದಲ್ಲಿ ಸಂಭ್ರಮದ ಗೌರಿ ಹುಣ್ಣಿಮೆ ಮತ್ತು ಕಾರ್ತಿಕೋತ್ಸವ ಆಚರಣೆ
ಯಲ್ಲಾಪುರ : ಯಲ್ಲಾಪುರ ಪಟ್ಟಣದ ವೀರಭದ್ರ ದೇವಸ್ಥಾನ ದಲ್ಲಿ ಕಾರ್ತಿಕೋತ್ಸವ ಹಾಗೂ ಗೌರಿ ಹುಣ್ಣಿಮೆ ಆಚರಣೆ ಸಂಭ್ರಮ ದಿಂದ ನಡೆಯಿತು.ಕಾರ್ತಿಕೋತ್ಸವ ನಿಮಿತ್ತ ವಿಶೇಷ ಪೂಜೆ , ಮಹಾ ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಅಕ್ಕನ ಬಳಗ ಸದಸ್ಯರು ಸೇರಿದಂತೆ ಪಟ್ಟಣದ ವಿವಿಧೆಡೆ ಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವರಿಗೆ ಹಣ್ಣು ಕಾಯಿ ಅರ್ಪಿಸಿ ,ಹಣತೆಗಳಿಂದ ದೀಪ ಬೆಳಗಿಸಿ ಶ್ರ್ರಿ ದೇವರ ಕೃಪೆಗೆ ಪಾತ್ರರಾದರು.