ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲೋನಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಕ್ತಿ ಕಾಲೋನಿ ಗ್ರಾಮದ ಲೋಕೇಶ್ ಎಂಬವರ ಬಾಳೆತೋಟದಲ್ಲಿ ಇಂದು ಬೆಳಗ್ಗೆ ಹುಲಿ ಕಾಣಿಸಿಕೊಂಡು ಘರ್ಜಿಸುತ್ತಾ ಬೀಡುಬಿಟ್ಟಿತ್ತು. ರೈತರಿಂದ ಮಾಹಿತಿ ಪಡೆದ ಬಂಡೀಪುರ ಹುಲಿ ರಕ್ಷಿತಾರಣ್ಯದ ಮದ್ದೂರು ವಲಯ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಭಾನುವಾರ ಸಂಜೆ ಹೊತ್ತಿಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹುಲಿಗೆ ಅಂದಾಜು 7-8 ವರ್ಷ ವಯಸ್ಸಾಗಿದೆ. ಹುಲಿಯ ಎದೆ ಮತ್ತು ಹಿಂಗಾಲಿಗೆ ಗಾಯವಾಗಿದ್ದು ಸರಹದ್ದಿನ ಕಾದಾಟದಲ್ಲಿ ಗಾಯಗೊಂಡಿರುವ ಸಾಧ್ಯತೆ ಇದೆ.