ಹುಬ್ಬಳ್ಳಿ ನಗರ: ನಗರದಲ್ಲಿ ಕಾರಿಗೆ ಡಿಕ್ಕಿ ಹೊಡೆದ ಚಿಗರಿ ಬಸ್ : ಕಾರಿನಲ್ಲಿದವರು ಜಸ್ಟ್ ಮಿಸ್
ಹುಬ್ಬಳ್ಳಿಯಲ್ಲಿ ಬಿ.ಆರ್.ಟಿ.ಎಸ್. ಚಿಗರಿ ಬಸ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು. ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಹುಬ್ಬಳ್ಳಿ ಉಣಕಲ್ ಬಳಿ ಕಾರಿಗೆ ಚಿಗರಿ ಬಸ್ ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರಿನ ಹಿಂಭಾಗ ಜಖಂ ಗೊಂಡಿದ್ದು. ಚಿಗರಿ ಬಸ್ ರಸ್ತೆಯಲ್ಲಿ ಯಾವುದೇ ಖಾಸಗಿ ವಾಹನಗಳಿಗೆ ಸಂಚರಿಸಲು ಅನುಮತಿ ಇಲ್ಲದಿದ್ದರೂ ಕಾರ ಚಾಲಕ ಚಿಗರಿ ಬಸ್ ರಸ್ತೆಯಲ್ಲಿ ಕಾರ ಚಾಲನೆ ಮಾಡಿದ್ದು. ಕಾರಿಗೆ ಚಿಗರಿ ಬಸ್ ಡಿಕ್ಕಿ ಹೊಡೆದಿದೆ. ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.