ಹುಬ್ಬಳ್ಳಿ: ಸೌದಿ ಅರೇಬಿಯಾದಲ್ಲಿ ನಡೆದ ದುರ್ಘಟನೆಯಲ್ಲಿ ನನ್ನ ಕ್ಷೇತ್ರದ ವ್ಯಕ್ತಿಯ ಸಾವು ಆಗಿದೆ. ಈ ಬಗ್ಗೆ ಡಿಸಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ದೆಹಲಿಯಲ್ಲಿ ಮೃತರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಕುಟುಂಬಸ್ಥರ ಬೇಡಿಕೆ ಏನು ಅದಕ್ಕೆ ಸ್ಪಂದನೆ ಮಾಡುವೆ. ಸರ್ಕಾರದಿಂದ ಕಾನೂನು ತೊಡಕು ಇದ್ರೆ ನಾನು ವೈಯಕ್ತಿಕ ಸಹಾಯ ಮಾಡುವೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರಿಗೆ ತೆರಳಲು ಸಹಾಯ ಮಾಡುವೆ. ನನ್ನ ವೈಯಕ್ತಿಕ ಮತ್ತು ಸರ್ಕಾರದಿಂದ ಕುಟುಂಬಕ್ಕೆ ಸಹಾಯ ಮಾಡಲಾಗುತ್ತದೆ ಎಂದರು.