ಸಾಗರ: ಸಾಗರ ಕಾಲೇಜಿನಲ್ಲಿ ಸರ್ಪ ಭಯ: ವಿದ್ಯಾರ್ಥಿನಿಯರಲ್ಲಿ ಆತಂಕ
Sagar, Shimoga | Nov 23, 2025 ಕಾಲೇಜು ಆವರಣ ಸ್ವಚ್ಛತೆ ಇಲ್ಲದೆ ಗಿಡಗಂಟಿಗಳು ಬೆಳೆದಿರುವುದರಿಂದ ವಿದ್ಯಾರ್ಥಿಗಳಿಗೆ ಸರ್ಪಗಳ ಕಾಟ ಹೆಚ್ಚಾಗಿರುವ ಘಟನೆ ಸಾಗರದ ಶ್ರೀಮತಿ ಇಂದಿರಾ ಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದಿದೆ.ಸರಿಸುಮಾರು ಮೂರರಿಂದ ನಾಲ್ಕು ಸಾವಿರ ವಿದ್ಯಾರ್ಥಿಗಳು ಇರುವ ಕಾಲೇಜಿನಲ್ಲಿ ಪ್ರತಿನಿತ್ಯ ಸರ್ಪಗಳ ಕಾಟ ಹೆಚ್ಚಾಗುತ್ತಿದೆ ಕಾಲೇಜು ಆವರಣದಲ್ಲಿ ಬೆಳೆದಿರುವ ಗಿಡ ಗಂಟೆಗಳು ಸ್ವಚ್ಛತೆ ಇಲ್ಲದೆ ಪ್ರತಿ ದಿನ ಒಂದಲ್ಲ ಎರಡು ಮೂರು ಸರ್ಪಗಳು ಪ್ರವೇಶ ಮಾಡುತ್ತಿದ್ದು ವಿದ್ಯಾರ್ಥಿನಿಯರು ಭಯದ ವಾತಾವರಣದಲ್ಲಿ ಆವರಣದಲ್ಲಿ ಕಾಲು ಇಡುವ ಸ್ಥಿತಿ ಉದ್ಭವವಾಗಿದೆ. ಈ ಕುರಿತಾದ ಮಾಹಿತಿ ಭಾನುವಾರ ಲಭ್ಯವಾಗಿದೆ.