ಅರಸೀಕೆರೆ: ನಗರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕೂಲಿಂಗ್ ಗ್ಲಾಸ್ ಹಾಕಿ ಶಾಸಕ ಶಿವಲಿಂಗೇಗೌಡ ಭರ್ಜರಿ ಸ್ಟೆಪ್
ಆರಸೀಕೆರೆ: ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ ಶಿವಲಿಂಗೇಗೌಡ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಭರ್ಜರಿ ಸ್ಟೆಪ್ ಹಾಕಿದ್ದು ವೀಡಿಯೋ ಬಾರಿ ವೈರಲ್ ಆಗಿದೆ. ಅರಸೀಕೆರೆ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.9 ಮಲ್ಲೇಶ್ವರದಲ್ಲಿ ನಡೆದ 14 ನೇ ವರ್ಷದ ಶ್ರೀ ಸೇವಾಲಾಲ್ ಗಣಪತಿಯವರ ವಿಸರ್ಜನಾ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡ ಅವರು ಕುಣಿದು ಕುಪ್ಪಳಿಸಿದ್ದಾರೆ. ಡಿಜೆ ಸೌಂಡ್ಗೆ ಯುವಕರೊಂದಿಗೆ ಹೆಜ್ಜೆ ಹಾಕಿದ ಕೆಎಂಶಿ ಡ್ಯಾನ್ಸ್ಗೆ ಗ್ರಾಮಸ್ಥರು ಫಿಧಾ ಆಗಿದ್ದಾರೆ. ಇನ್ನು ಈ ವೀಡಿಯೋ ಭಾರಿ ವೈರಲ್ ಆಗಿದ್ದು ಜನರಿಂದ ಮೆಚ್ಚುಗೆ ಪಡೆದಿದ್ದಾರೆ