ಕಲಬುರಗಿ : ಮನೆಯೊಂದಕ್ಕೆ ವಿದ್ಯುತ್ ಕನೆಕ್ಷನ್ ಕೊಡಲು ಕಂಬ ಏರಿದ ಯುವಕ, ಏಕಾಏಕಿ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ನರಳಿ ನರಳಿ ಪ್ರಾಣ ಬಿಟ್ಟ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ.. ಡಿಸೆಂಬರ್ 10 ರಂದು ಬೆಳಗ್ಗೆ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ.. 18 ವರ್ಷದ ಶ್ರೀಮಂತ ಸುಭಾನ್ ಎಂಬಾತ ಮನೆಯೊಂದಕ್ಕೆ ವಿದ್ಯುತ್ ಕನೆಕ್ಷನ್ ಕೊಡಲು ಕಂಬ ಏರಿದ್ದಾನೆ.. ಈ ವೇಳೆ ವಿದ್ಯುತ್ ಶಾಕ್ ತಗುಲಿ ಕಂಬದ ಮೇಲೆಯೇ ಕೆಲಹೊತ್ತು ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ. ಇನ್ನೂ ಘಟನ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ