ಬಳ್ಳಾರಿ: ನಗರದ ಸರ್ಕಾರಿ ಬಾಲಕಿಯರ ನಿಲಯದಲ್ಲಿ ಇದೆಂಥ ಅವ್ಯವಸ್ಥೆ, ಸಮಸ್ಯೆ ಗೊತ್ತಿದ್ದು, ಗೊತ್ತಿಲ್ಲದಂತೆ ನಟಿಸಿದ ಲೇಡಿ ವಾರ್ಡನ್ #localissue
ಬಳ್ಳಾರಿ ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ಬಾಲಕಿಯರ ವಿಭಜಿತ ವಿದ್ಯಾರ್ಥಿ ನಿಲಯದಲ್ಲಿ ಊಟದ ಮತ್ತು ಬಾತ್ ರೂಮ್ ಸೇರಿದಂತೆ ಮೂಲಭೂತ ಸಮಸ್ಯೆಗಳಿಂದ ತುಂಬಿತುಳುಕುತ್ತಿದೆ. ನಿಲಯದಲ್ಲಿ ಸರಿಯಾದ ಶೌಚಾಲಯವಿಲ್ಲ. ಸ್ವಚ್ಛತೆಯಿಲ್ಲದೆ ಬಾಲಕಿಯರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು 70 ವಿದ್ಯಾರ್ಥಿನಿಯರು ಈ ನಿಲಯದಲ್ಲಿದ್ದಾರೆ. ಈ ಸಂಬಂಧ ಬಳ್ಳಾರಿ ಮಹಾನಗರ ಪಾಲಿಕೆಯ 22ನೇ ವಾರ್ಡಿನ ಸದಸ್ಯರಾದ ಹನುಮಂತಪ್ಪ, ಸಿದ್ದೇಶ್ ಉಳೂರು ಅವರು ಗುರುವಾರ ಸಂಜೆ ಐದು ಗಂಟೆಗೆ ಬೇಟಿ ನೀಡಿದ್ದಾರೆ. ಪರಿಶಿಷ್ಟ ಪಂಗಡಗಳ ಇಲಾಖೆಯ ಜಿಲ್ಲಾ ಅಧಿಕಾರಿ ದಿವಾಕರ್, ತಾಲೂಕು ಅಧಿಕಾರಿ ಗಾದಿಲಿಂಗಪ್ಪ ಹಾಗೂ ವಾರ್ಡನ್ ದೀಪಾ ಕೂಡ ಭೇಟಿ ನೀಡಿದ್ದಾರೆ.