ಕಾರವಾರ ತಾಲ್ಲೂಕಿನ ಬಿಣಗಾ ಸೀತಾನಗರದ ಶ್ರೀ ನಾಗದೇವತಾ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಪಾಲ್ಗೊಂಡು ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೆಕರ, ನಗರಸಭೆಯ ಮಾಜಿ ಅಧ್ಯಕ್ಷ ರವಿರಾಜ ಅಂಕೋಲೆಕರ, ಪ್ರಮುಖರಾದ ಉದಯ ಶೆಟ್ಟಿ, ಸೂರ್ಯಪ್ರಕಾಶ, ಅಶೋಕ ಗೌಡ, ವಸಂತ ಗೌಡ, ನಯನಾ ಮಾಳ್ಸೇಕರ, ಕಿಶನ್ ಕಾಂಬಳೆ ಉಪಸ್ಥಿತರಿದ್ದರು.