ಕುಂದಗೋಳ: ಯರಗುಪ್ಪಿ ಗ್ರಾಮದಲ್ಲಿ ದೇವಸ್ಥಾನಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಎಂ.ಆರ್.ಪಾಟೀಲ್
ಕುಂದಗೋಳದ ತಾಲೂಕಿನ ಯರಗುಪ್ಪಿಯಲ್ಲಿ ಇಂದು ಶ್ರೀ ಕಲ್ಮೇಶ್ವರ  ದೇವಸ್ಥಾನ ಮತ್ತು ಶ್ರೀ ಮೈಲಾರಲಿಂಗೇಶ್ವರ  ದೇವಸ್ಥಾನಗಳ ನಿರ್ಮಾಣ ಕಾಮಗಾರಿಗೆ  ಭೂಮಿಪೂಜೆ  ನೆರವೇರಿಸಿ ಶಾಸಕರಾದ ಎಂ.ಆರ್.ಪಾಟೀಲ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದ ನಂತರ ಸರ್ಕಾರಿ ಅಧಿಕಾರಿಗಳೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಗುರು ಹಿರಿಯರು ಮತ್ತು ಪಕ್ಷದ ಮುಖಂಡರು ಜೊತೆಗಿದ್ದರು.