ಕಲಬುರಗಿ: ಗೃಹ ಸಚಿವರೇ ಸ್ವಾತಂತ್ರ್ಯ ಯಾರಿಗೆ ಕೊಟ್ಟಿದ್ದಿರಿ? ಪೊಲೀಸರಿಗೋ ಅಥವಾ ದರೋಡೆಕೋರರಿಗಾ? ನಗರದಲ್ಲಿ ಎಮ್ಎಲ್ಸಿ ರವಿಕುಮಾರ್
ಕಲಬುರಗಿ : ಮೈಸೂರು ಜ್ಯುವೇಲರಿ ಶಾಪ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ವಿರುದ್ಧ ಕಲಬುರಗಿಯಲ್ಲಿ ಡಿ29 ರಂದು ಬೆಳಗ್ಗೆ 11 ಗಂಟೆಗೆ ಎಮ್ಎಲ್ಸಿ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.. ರಾಜ್ಯದಲ್ಲಿ ಹಗಲಲ್ಲೆ ದರೋಡೆಗಳು ಆಗ್ತಿದ್ದು, ರಾಜ್ಯದ ಪೊಲೀಸರು ಏನ್ ಮಾಡ್ತಿದ್ದಾರೆಂದು ರವಿಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.. ಗೃಹ ಸಚಿವರೇ ಪೂರ್ತಿ ಸ್ವಾತಂತ್ರ ಯಾರಿಗೆ ಕೊಟ್ಟಿದ್ದಿರಿ.? ದರೋಡೆಕೋರರಿಗೋ ಅಥವಾ ಪೊಲೀಸರಿಗೋ ಅಂತಾ ಸರ್ಕಾರದ ವಿರುದ್ಧ ರವಿಕುಮಾರ್ ಕಿಡಿಕಾರಿದ್ದಾರೆ.