ಬಳ್ಳಾರಿ: ತಾಲೂಕಿನ ಅಸುಂಡಿ ಯುವಕನ ಹತ್ಯೆ ಪ್ರಕರಣ;
ತನಿಖೆಯ ಜಾಡು ವಿವರಿಸಿದ ಎಸ್ ಪಿ
ತಾಲೂಕಿನ ಅಸುಂಡಿ ಗ್ರಾಮದ ರವಿ ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ಈಗಾಗಲೇ ಬಂಧಿಸಿರುವ ಪೊಲೀಸರು, ಘಟನೆಗೆ ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ಅಸುಂಡಿ ಗ್ರಾಮದಲ್ಲಿ ಈ ಹಿಂದೆ ನಡೆದಿದ್ದ ಅತ್ಯಾಚಾರ ಪ್ರಯತ್ನ ಘಟನೆಗೆ ಸಂಬಂಧಿಸಿದಂತೆ ರವಿಯು ಮುಂದೆ ನಿಂತು ಪ್ರಕರಣ ದಾಖಲಿಸಿದ್ದ. ಇದರಿಂದ ಆರೋಪಿ ಜೈಲುಪಾಲಾಗಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ರವಿಯನ್ನು ಹತ್ಯೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ಶೋಭಾರಾಣಿ ಮಂಗಳವಾರ ಮಧ್ಯಾಹ್ನ 1:30 ಕ್ಕೆ ತಿಳಿಸಿದ್ದಾರೆ. ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸುಂಡಿಯ ದೊಡ್ಡ ಹೊನ್ನೂರಸ್ವಾಮಿ, ಶೇಖರ, ದುಬ್ಬ ಹೊನ್ನೂರಸ್ವಾಮಿ, ದೊಡ್ಡ ಎರೆಪ್ಪ, ನಾಗರಾಜ, ಆಟೋ ಎರಿಸ್ವಾಮಿ, ಪ್ರಕಾಶ್, ಸುರೇಂದ್ರ, ಹೊನ್ನೂರಸ್ವಾಮಿ, ಪ್ರಸಾದ್