ಹುಮ್ನಾಬಾದ್: ಮಾಣಿಕನಗರ ಮೂಲ ನಿವಾಸಿಗಳಿಗೆ ಮಾತ್ರ ಮಧುಮತಿ ಕಲ್ಯಾಣ ಮಂಟಪ ಉಚಿತ: ಮಾಣಿಕನಗರದಲ್ಲಿ ಮಾಣಿಕಪ್ರಭು ಸಂಸ್ಥಾನ ಕಾರ್ಯದರ್ಶಿ ಆನಂದರಾಜ ಪ್ರಭು
ಮಾಣಿಕನಗರದ ಮೂಲ ನಿವಾಸಿಗಳಿಗೆ ಮಾತ್ರ ಶುಭ ಸಮಾರಂಭ ಆಯೋಜಿಸಲು ಮಧ್ಯಮುತಿ ಕಲ್ಯಾಣ ಮಂಟಪ ಉಚಿತವಾಗಿ ನೀಡಲಾಗುವುದು ಎಂದು ಸಂಸ್ಥಾನದ ಕಾರ್ಯದರ್ಶಿ ಅನಂತ ಪ್ರಭು ಅವರು ಘೋಷಿಸಿದರು. ಮಾಣಿಕ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಮಧುಮತಿ ಕಲ್ಯಾಣ ಮಂಟಪ ಸಂಸ್ಥಾನದ ಪೀಠಾಧಿಪತಿ ಪೂಜಾ ಡಾ. ಜ್ಞಾನರಾಜಶ್ರೀ ಬುಧವಾರ ಮಧ್ಯಹ್ನ 2ಕ್ಕೆ ಉದ್ಘಾಟಿಸಿದ ಬಳಿಕ ಆನಂದರಾಜ ಪ್ರಭು ಮಾತನಾಡಿ ಈ ಸೇವೆ ಮಾಣಿಕನಗರ ನಿವಾಸಿಗಳ ಸಂಬಂಧಿಗಳಿಗೆ ಇರುವುದಿಲ್ಲ ಎಂದರು.