ಆನೇಕಲ್: ಐಷಾರಾಮಿ ವಾಚ್‌ಗಳನ್ನ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧಿಸಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು
ಬ್ರ್ಯಾಂಡೆಡ್ ವಾಚ್‌ಗಳನ್ನ ಕಳ್ಳತನ ಮಾಡಿದ್ದ ಆರೋಪಿಯನ್ನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಿಂದೂಪುರ ಮೂಲದ ಶೇಷರೆಡ್ಡಿ ಎಂಬ ಆರೋಪಿಯನ್ನ ಬಂಧಿಸಲಾಗಿದ್ದು,10 ಲಕ್ಷ ರೂ ಮೌಲ್ಯದ 70 ಐಷಾರಾಮಿ ವಾಚ್‌ಗಳನ್ನ ವಶಕ್ಕೆ ಪಡೆಯಲಾಗಿದೆ.ಪ್ರಕರಣದ ಕುರಿತು ಸೆಪ್ಟೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಮಾಹಿತಿ ನೀಡಿದ ಪೊಲೀಸರು, ಲಾಜಿಸ್ಟಿಕ್ಸ್ ಕಂಪನಿಯೊಂದರಿಂದ ಶೋ ರೂಮ್‌ಗಳಿಗೆ ವಾಚ್ ಡೆಲಿವರಿ ಮಾಡುತ್ತಿದ್ದ ಆರೋಪಿ, ಪ್ರತಿ ದಿನ ಮನೆಗೆ ಹೋಗುವಾಗ ಯಾರಿಗೂ ಗೊತ್ತಿಲ್ಲದೆ ವಾಚ್ ಕದಿಯುತ್ತಿದ್ದ. ಸುಮಾರು 40 ರಿಂದ 50 ಸಾವಿರ ಬೆಲೆಯ ಆ ವಾಚ್‌ಗಳನ್ನ ಅರ್ಧ ಬೆಲೆಗೆ ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದರು.