ಹುನಗುಂದ: ಹುನಗುಂದ ಸಮೀಪದ ಚರಂತಿಮಠ ಕಾಲೇಜಿನ ಆವರಣದಲ್ಲಿ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿದ ಡಿ.ಜಿ.ಪಾಟೀಲ
ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ ಹೊರ ವಲಯದಲ್ಲಿನ ಚರಂತಿಮಠ ಕಾಲೇಜಿನ ಆವರಣದಲ್ಲಿ ಹುನಗುಂದ ತಾಲೂಕಾ ಬಿಜೆಪಿ ವತಿಯಿಂದ ನರೇಂದ್ರ ಮೋದಿಜಿ ಜನ್ಮದಿನ ಅಂಗವಾಗಿ ಸೇವಾ ಪಾಕ್ಷೀಕ ಕಾರ್ಯಕ್ರಮದ ಅಂಗವಾಗಿ ತಾಯಿಯ ಹೆಸರಿನಲ್ಲಿ ವೃಕ್ಷ ಅಭಿಯಾನಕ್ಕೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸೆ.೩೦ ಮಧ್ಯಾಹ್ನ ೧೨ ಗಂಟೆಗೆ ಸಿಸಿ ನೆಟ್ಟುವ ಮೂಲಕ ಚಾಲನೆ ನೀಡಿದರು. ಈ ಸಮಯದಲ್ಲಿ ಡಾ.ಮಹಾಂತೇಶ ಕಡಪಟ್ಟಿ, ಗ್ರಾಮೀಣ ಮಂಡಳದ ಅಧ್ಯಕ್ಷ ಮಹಾಂತಗೌಡಪಾಟೀಲ ತೊಂಡಿಹಾಳ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.