ಮೈಸೂರು: ಎರಡನೇ ದಿನಕ್ಕೆ ಕಾಲಿಟ್ಟ ಕನ್ನಡಾಂಬೆ ರಕ್ಷಣಾ ವೇದಿಕೆ ಕಾಲ್ನಡಿಗೆ ಜಾಥ: ನಗರದಲ್ಲಿ ಕನ್ನಡಕ್ಕೆ ಆದ್ಯತೆ ನೀಡದ ಖಾಸಗಿ ಕಾರ್ಖಾನೆಗಳಿಗೆ ತರಾಟೆ
Mysuru, Mysuru | Sep 16, 2025 ನಾಮಫಲಕಗಳ ಶೇ.೬೦ಕ್ಕಿಂತಲೂ ಅಧಿಕ ಸ್ಥಳದಲ್ಲಿ ಕನ್ನಡ ಭಾಷೆಯ ಬಳಕೆ, ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವುದು, ಕಾರ್ಖಾನೆಗಳಲ್ಲಿ ಕಾಯಂ ಮತ್ತು ಗುತ್ತಿಗೆ ನೌಕರರ ವೇತನ ಮತ್ತು ಊಟೋಪಚಾರಗಳಲ್ಲಿ ತಾರತಮ್ಯ ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಕೈಗಾರಿಕಾ ಪ್ರದೇಶಗಳಲ್ಲಿ ನಡೆಸುತ್ತಿರುವ ಕಾಲ್ನಡಿಗೆ ಜಾಥ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ ಅವರು, ಸರ್ಕಾರದ ನಿಯಮ ಪಾಲಿಸದ ಕಾರ್ಖಾನೆಗಳ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.