ಕಲಬುರಗಿ: ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ 15 ಪಾಯಿಂಟ್ ಪ್ರೋಗ್ರಾಂ ಸದಸ್ಸರಾಗಿ ಅಬ್ದುಲ್ ಜಬ್ಬಾರ್ ಆಯ್ಕೆ: ನಗರದಲ್ಲಿ ಶಾಸಕಿ ಕನೀಜ್ ಫಾತಿಮಾ ಸಂತಸ
ಹೊಸದಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸರ್ಕಾರದ 15 ಪಾಯಿಂಟ್ ಕಾರ್ಯಕ್ರಮದ ಅಡಿಯಲ್ಲಿ ರಚಿಸಲಾದ ಕಲಬುರಗಿ ಜಿಲ್ಲಾ ಸಮಿತಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ ಹೊನಕಿರಣಗಿ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಅವರ ನೇಮಕದ ಹಿನ್ನೆಲೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು ಅಬ್ದುಲ್ ಜಬ್ಬಾರ್ ಅವರನ್ನು ಸನ್ಮಾನಿಸಿ ಸಂತಸ ವ್ಯಕ್ತ ಪಡಿಸಿದರು. ಬುದವಾರ 4 ಗಂಟೆಗೆ ಸನ್ಮಾನ ಮಾಡಲಾಯಿತು.