ಸಿಂದಗಿ: ಗಬಸಾವಳಗಿಯಲ್ಲಿ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಿಲ್ಲಿಸಲು ತಹಶೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ ಮನವಿ
ಗಬಸಾವಳಗಿಯಲ್ಲಿ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಿಲ್ಲಿಸಲು ತಹಶೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ಮಾತನಾಡಿದ ಅವರು, ಆಲಮೇಲ ತಾಲ್ಲೂಕಿನ ಗಬಸಾವಳಗಿ ಗ್ರಾಮದಲ್ಲಿ 'ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲ್ಲೂಕಿಗೆ ಸೇರಿಸುವಂತೆ' ಹಮ್ಮಿಕೊಂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಿಲ್ಲಿಸಬೇಕು. ಈಗ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸರ್ಕಾರಕ್ಕೆ ಯಾವ ನಿರ್ಣಯ ತಗೆದುಕೊಳ್ಳಲು ಆಗುವುದಿಲ್ಲ, ಆದ್ದರಿಂದ ಹೋರಾಟಗಾರರು ಲೋಕಸಬಾ ಚುನಾವಣೆ ಮುಗಿಯುವವರೆಗೂ ಹೋರಾಟ ನಿಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು. ಈ ವೇಳೆ ಆಲಮೇಲ ತಹಶೀಲ್ದಾರ್ ಮಹಾದೇವ ಸನಮರಿ ಸಹ ಇದ್ದರು.