ಚಿಂತಾಮಣಿ: ತಳಗವಾರ-ಜೋಡಿಹೊಸಹಳ್ಳಿಗಳ ನಡುವೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಚಿಂತಾಮಣಿ ತಾಲೂಕಿನ ತಳಗವಾರ ಮತ್ತು ಜೋಡಿಹೊಸಹಳ್ಳಿ ಕ್ರಾಸ್ ಸಮೀಪ ಭಾನುವಾರ ಅಪರಿಚಿತ ವಾಹನವು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನು ಘಟನೆ ನಡೆದಿರುವುದು ಇಂದು ಬೆಳಕಿಗೆ ಬಂದಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ ಈರೇಕಟ್ಟಿಗೇನಹಳ್ಳಿಯ ನಿವಾಸಿ ನವೀನ್ ಕುಮಾರ್ ಎಂದು ತಿಳಿದು ಬಂದಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.