ಬೆಂಗಳೂರು ಉತ್ತರ: RT ನಗರದಲ್ಲಿ ಲಾಂಗ್ ಅಟ್ಯಾಕ್! ಚಿಕ್ಕ ವಿಚಾರಕ್ಕೆ ಲಾಂಗ್ ಬೀಸಿದ ಪುಡಿ ರೌಡಿ!
ಆಗಸ್ಟ್ 16 ಬೆಳಿಗ್ಗೆ 6.30ರ ಸುಮಾರಿಗೆ ಬೇಕರಿ ಮಾಲೀಕನ ಮೇಲೆ ಪುಡಿ ರೌಡಿಗಳು ಅಟ್ಯಾಕ್ ಮಾಡಿದ್ದಾರೆ. RT ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕ್ಷುಲ್ಲಕ ವಿಚಾರಕ್ಕೆ ಬೇಕರಿ ಮಾಲೀಕನ ಮೇಲೆ ಲಾಂಗ್ ಬೀಸಿದ್ದಾರೆ. ಆಟೋದಲ್ಲಿ ಬಂದಂತಹ ಕಿಡಿಗೇಡಿ ಟೀ ಕುಡಿದು ಅಲ್ಲೇ ಇದ್ದಂತಹ ಕಸ್ಟಮರ್ಸ್ ಜೊತೆ ಕ್ಯಾತೆ ತೆಗೆದು ಜಗಳ ಮಾಡಿದ್ದಾನೆ. ಗ್ರಾಹಕರ ಜೊತೆ ಜಗಳ ಮಾಡಬೇಡಿ ಅಂತ ಬೇಕರಿ ಮಾಲೀಕ ಹೇಳಿದ್ದಕ್ಕೆ ಬೇಕರಿ ಮಾಲೀಕನ ಮೇಲೆ ಲಾಂಗ್ ಬೀಸಿರುವಂತಹ ಘಟನೆ ಬೆಳಕಿಗೆ ಬಂದಿದೆ ಘಟನೆ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲಾಗಿದೆ.