ಹುಬ್ಬಳ್ಳಿ ನಗರ: ನಗರದಲ್ಲಿ ಯುವಕನಿಗೆ ಕಪಾಳ ಮೋಕ್ಷ ಮಾಡಿದ ಪೊಲೀಸ್ ಪೇದೆ
ಹುಬ್ಬಳ್ಳಿಯಲ್ಲಿ ಕ್ಷುಲಕ ಕಾರಣಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಯುವಕನಿಗೆ ಹಾಗೂ ಪೊಲೀಸ್ ಪೇದೆ ನಡುವೆ ಜಗಳವಾಗಿ ಪೊಲೀಸ್ ಪೇದೆ ಯುವಕನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಮುಖ್ಯರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಪೊಲೀಸ್ ಪೇದೆಯವರು ಹಾಗೂ ಯುವಕರ ನಡುವೆ ಜಗಳವಾಗಿ ನಡು ರಸ್ತೆಯಲ್ಲಿ ಸಾರ್ವಜನಿಕರ ಮುಂದೆ ಯುವಕನಿಗೆ ಪೊಲೀಸ್ ಪೇದೆ ಓರ್ವರು ಕಪಾಳ ಹೊಡೆದಿದ್ದು. ಇಬ್ಬರ ಜಗಳದಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿತ್ತು.