ಹುಬ್ಬಳ್ಳಿ ನಗರ: ಮೂವರು ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಮಾಡಿ ಮರು ಜೀವ ನೀಡಿದ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು
ಹುಬ್ಬಳ್ಳಿಯ ನಿವಾಸಿ 41 ವರ್ಷದ ರೇಣುಕಾ ಎಂಬುವವರು ಗರ್ಭ ಕ್ಯಾನ್ಸರ್ ಗೆ ಒಳಗಾಗಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಇತ್ತೀಚೆಗೆ ಇವರು ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ ತುರ್ತು ಶಸ್ತ್ರಚಿಕಿತ್ಸೆ ಮಾಡುವ ಅವಶ್ಯಕತೆ ಇರುವುದು ಕಂಡುಬಂದಿದೆ. ಹೀಗಾಗಿ ಇವರನ್ನು ಆಸ್ಪತ್ರೆಯಲ್ಲಿ ಕೂಡಲೇ ದಾಖಲಿಸಿ, ಡಾ. ಶ್ರೀಧರ ದಂಡೆಪ್ಪನವರ ಆಸ್ಪತ್ರೆಯ ವೈದ್ಯರಾದ ಚನ್ನಬಸಪ್ಪ ಕೋರಿ, ಸಂಜೀವ್ ಅವರ ಸಹಕಾರದಿಂದ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿ ಬರೋಬ್ಬರಿ 2.5 ಕೆಜಿ ಗಡ್ಡೆಯನ್ನು ಹೊರಗಡೆ ತೆಗೆದಿದ್ದಾರೆ. ಈಗ ತಾಯಿ ಸುರಕ್ಷಿತವಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಟ್ಯೂಮರ್ ರೋಗಕ್ಕೆ ತುತ್ತಾಗಿದ್ದ ಶಿರೂರ ಗ್ರಾಮದ 45 ವರ್ಷದ ಫಾತೀಮಾ ಎಂಬ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.