ಸಾರ್ವಜನಿಕ ಜನ ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಪೊಲೀಸ್ ಸಹಯೋಗದೊಂದಿಗೆ ಪುರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಪಟ್ಟಣದಲ್ಲಿನ ಪಾದಚಾರಿ ರಸ್ತೆ ಅತಿಕ್ರಮಿಸಿದ ಗೂಡ್ಸ್ ವಾಹನಗಳು ಮತ್ತು ತಳ್ಳುಬಂಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡರು. ಈ ವೇಳೆ ಚಿಟಗುಪ್ಪ ಪಿಎಸ್ಐ ಬಸವಲಿಂಗಪ್ಪ ಗೋಡಿಹಾಳ ಹಾಗೂ ಸಿಬ್ಬಂದಿ ಮತ್ತು ಪುರಸಭೆ ವಿವಿಧ ಹಂತದ ಅಧಿಕಾರಿ ಹಾಗೂ ಸಿಬ್ಬಂದಿ ಹಾಜ