ಸಿದ್ಧಾಪುರ: ಬಿಕ್ಕಳಸೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹಾನಿಯಾಗಿದ್ದ ಮನೆಗೆ ಶಾಸಕ ಭೀಮಣ್ಣ ಭೇಟಿ
ಸಿದ್ದಾಪುರ : ತಾಲೂಕಿನ ಶಿರಳಗಿ ಪಂಚಾಯತದ ಬಿಕ್ಕಳಸೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಹಾನಿಯಾಗಿದ್ದ ಮನೆಗೆ ಶಾಸಕ ಭೀಮಣ್ಣ ನಾಯ್ಕ ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ, ಆರ್ಥಿಕ ಸಹಕಾರ ನೀಡಿದರು. ರಾಜಶೇಖರ್ ಗೋಪಾಲ ಮಡಿವಾಳ ಎಂಬುವರ ಮನೆ ಮಂಗಳವಾರ ಶಾರ್ಟ್ ಸರ್ಕ್ಯೂಟ್ ಆಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಹೀಗಾಗಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಮುಂದಿನ ಅಗತ್ಯ ಕ್ರಮಕ್ಕೆ ತಿಳಿಸಿ ವೈಯಕ್ತಿಕ ಸಹಾಯ ಮಾಡಿದರು.